
ಅರಿವು ಶೈಕ್ಷಣಿಕ ಸಾಲ ಯೋಜನೆ: ಸಾಲದ ಉದ್ದೇಶ: ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕಾಭಿವೃದ್ಧಿಗಾಗಿ ಆರ್ಥಿಕ ನೆರವು. ಸಾಲದ ಮೊತ್ತ: ವಾರ್ಷಿಕ ರೂ.1.00ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4.00ಲಕ್ಷಗಳಿಂದ ರೂ.5.00ಲಕ್ಷಗಳ ವರೆಗೆ ಸಾಲ. ಬಡ್ಡಿದರ: ವಾರ್ಷಿಕ ಶೇ.2ರಷ್ಟು. ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಸವಿತಾ ಮತ್ತು ಅದರ ಉಪ ಸಮುದಾಯಗಳು, ಮಡಿವಾಳ ಮತ್ತು ಅದರ ಉಪ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು ಒಕ್ಕಲಿಗ ಮತ್ತು ಅದರ ಉಪ ಸಮುದಾಯಗಳು, ಲಿಂಗಾಯತ ಮತ್ತು ಅದರ ಉಪ ಸಮುದಾಯಗಳು, ಮರಾಠ ಮತ್ತು ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ (ಸಿ.ಇ.ಟಿ.) ಪ್ರವೇಶ ಪಡೆದಿರಬೇಕು. ವ್ಯಾಸಂಗದ ಕೋರ್ಸ್‌ಗಳು: (1)ಬಿ.ಇ., (2)ಎಂ.ಬಿ.ಬಿ.ಎಸ್., (3)ಬಿ.ಯೂ.ಎಂ.ಎಸ್., (4)ಬಿ.ಡಿ.ಎಸ್. (5)ಬಿ.ಎ.ಎಂ.ಎಸ್. (6)ಬಿ.ಎಚ್.ಎಂ.ಎಸ್. (7)ಎಂ.ಬಿ.ಎ. (8)ಎಂ.ಟೆಕ್. (9)ಎಂ.ಇ., (10)ಎಂ.ಡಿ., (11)ಪಿಹೆಚ್.ಡಿ. (12)ಬಿ.ಸಿ.ಎ./ಎಂ.ಸಿ.ಎ (13)ಎಂ.ಎಸ್.ಆಗ್ರಿಕಲ್ಚರ್ (14)ಬಿ.ಎಸ್‌ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16)ಬಿ.ಎಸ್‌ಸಿ. ಪ್ಯಾರಾ ಮೆಡಿಕಲ್ (17)ಬಿ.ಎಸ್‌ಸಿ. ಬಯೋ ಟೆಕ್ನಾಲಜಿ (18)ಬಿ.ಟೆಕ್ (19)ಬಿ.ಪಿ.ಟಿ. (20)ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24)ಎಂ.ಎಸ್.ಡಬ್ಲ್ಯೂ (25)ಎಲ್.ಎಲ್.ಎಂ. (26)ಎಂ.ಎಫ್.ಎ. (27)ಎಂ.ಎಸ್‌ಸಿ. ಬಯೋ ಟೆಕ್ನಾಲಜಿ ಮತ್ತು (28)ಎಂ.ಎಸ್‌ಸಿ. ಎಜಿ. ಮರುಪಾವತಿ: ಕೋರ್ಸ್ ಪೂರ್ಣಗೊಂಡ 4 ತಿಂಗಳ ನಂತರ 3 ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡುವುದು. ಅಭ್ಯರ್ಥಿಗಳ ಆಯ್ಕೆ: ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಇತರೆ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡುವುದು ಅಭ್ಯರ್ಥಿಯ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಂದ (Study Certificate) ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕ ಪಟ್ಟಿ, ಪೋಷಕರ ಒಪ್ಪಿಗೆ ಪತ್ರ, ಶುಲ್ಕ ಪಾವತಿ ರಸೀದಿ, ಜಾಮೀನುದಾರರ ಒಪ್ಪಿಗೆ ಪತ್ರವನ್ನು ಅಭ್ಯರ್ಥಿಯು ಮನವಿ ಪತ್ರದೊಂದಿಗೆ ಸಲ್ಲಿಸಿದ್ದಲ್ಲಿ ಮಂಜೂರಾದ ಸಾಲವನ್ನು ಬಿಡುಗಡೆ ಮಾಡಲಾಗುವುದು. ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು-560 052 md.dbcdc@gmail.com ದೂರವಾಣಿ: 080-22374832 ಸಹಾಯವಾಣಿ: +91 709040100 / +91 709040900 https://dbcdc.karnataka.gov.in
This post was published on 10th August, 2025 by Akash on his Instagram handle "@akashkatate_ (Akash Katate)". Akash has total 27.7K followers on Instagram and has a total of 90 post.This post has received 47 Likes which are lower than the average likes that Akash gets. Akash receives an average engagement rate of 14.97% per post on Instagram. This post has received 0 comments which are lower than the average comments that Akash gets. Overall the engagement rate for this post was lower than the average for the profile.